Sunday, December 14, 2008

ಈ ಟಿವಿ ಕನ್ನಡ ಚಾನೆಲ್ ನಲ್ಲಿ ನನ್ನ ಅಮ್ಮ :-)

ನಮ್ಮ ಮನೆಯಲ್ಲಿ ನನಗೆ ಅತ್ಯಂತ ಇಷ್ಟವಾದ ಅಮ್ಮ ಮಾಡುವ ತಿನಿಸು ಎಂದರೆ ಮೆಂತೆ ಕಡುಬು. ನನಗೆ ತಿಳಿದಿರುವ ಹಾಗೆ ನೀವು ಈ ಹೆಸರು ಕೆಳಿರಲಿಕಿಲ್ಲ ನಾನು ಯಾರ ಮನೆಯಲ್ಲೂ ಇದನ್ನು ಮಾಡಿರುವುದು ನೋಡಿಲ್ಲ, ಇದೊಂದು ವಿಶಿಷ್ಟವಾದ ತಿನಿಸು. ಮೆಂತೆ ಕಡುಬು ಮಾಡುವುದು ಸ್ವಲ್ಪ ಕಷ್ಟ ಹಾಗು ಇದನ್ನು ಮಾಡುವುದಕ್ಕೆ ಹೆಚ್ಚು ಸಮಯ ಬೇಕು. ನಮ್ಮ ಮನೆಯಲ್ಲಿ ಇದನ್ನು ಮೊದಲಿನಿಂದಲು ಮಾಡಿಕೊಂಡು ಬಂದಿರುವುದು ನೆನಪು. ನನಗೂ ಅಡುಗೆ ಮಾಡುವ ಉತ್ಸಾಹ ಜಾಸ್ತಿ ಹಾಗು ಅಲ್ಪ ಸ್ವಲ್ಪ ಕಲಿತಿದ್ದೇನೆ.

ಈ ತಿನಿಸು ಹೇಗೆ ನನ್ನ ಅಮ್ಮನನ್ನು ಈ ಟಿವಿ ಕನ್ನಡ ವಾಹಿನಿ ತನಕ ಕರೆದೊಯ್ಯಿತು ಅಂತ ಹೇಳಲು ಕುಷಿ ಪಡುವೆ. ಇದಕ್ಕೆಲ್ಲ ಕಾರಣ ನಾನೇ :-). ಈ ಟಿವಿ ಕನ್ನಡ ತನ್ನ ಮೂರನೇ ವಾರ್ಷಿಕೋತ್ಸವ ಪ್ರಯುಕ್ತ ಒಂದು ಅಡುಗೆ ಕಾರ್ಯಕ್ರಮ ಅಯೊಜಿಸಿತ್ತು. ಪ್ರಮುಖ ಉತ್ಪಾದಕರಾದ Vim ಹಾಗು Prestige ರವರ ಸಹ ಪ್ರಯೋಜತ್ವಕದಲ್ಲಿ ಈ ಅಡುಗೆ ಕಾರ್ಯಕ್ರಮ ಅಯೊಜಿಸಿದ್ದರು. ಈ ಕಾರ್ಯಕ್ರಮಕ್ಕೆ ೪ ವಿಶಿಷ್ಟ ತಿನಿಸುಗಳನ್ನು ಆರಿಸುವ ಸಲುವಾಗಿ ವೀಕ್ಷಕರನ್ನು ಪತ್ರದ ಮೂಲಕ ತಮ್ಮ ವಿಶಿಷ್ಟ ತಿನಿಸುಗಳನ್ನು ವಿವರಿಸಿ ಕಳಿಸಲು ಕೋರಲಾಗಿತ್ತು. ವೀಕ್ಷಕರ ಪತ್ರಗಳಿಂದ ಈ ಟಿವಿ ಕನ್ನಡ ವಾಹಿನಿಯ ಆಯೋಜಕರು ೪ ಅತ್ಯುತ್ತಮ ತಿನಿಸುಗಳನ್ನು ಆರಿಸಬೇಕಿತ್ತು.

ಈ ಕಾರ್ಯಕ್ರಮ ವಿಶಿಷ್ಟತೆ ಪಡೆದುಕೊಳ್ಳಲು ೨ ಕಾರಣಗಳಿದ್ದವು .....ಒಂದು, ಇದಕ್ಕೆ ಇದ್ದ ೩ ಲಕ್ಷದ ವರೆಗಿನ ಬಹುಮಾನ .... ಇನ್ನೊಂದು, ಇದನ್ನು ವೀಕ್ಷಕರಿಗೆ ವಿವರಿಸಲು ಬಂದ ಖ್ಯಾತ ನಟಿ ಶ್ರುತಿ. ಹಾಗೆ ಒಂದು ದಿನ ಶ್ರುತಿ ಅವರ ವಿವರಣೆ ಕೇಳಿ ನಾನು ಯಾಕೆ ಒಂದು ಕೈ ನೋಡಬಾರದು ಎಂದು ಅಮ್ಮನ ಮುಂದೆ ಒಂದು ಪೆನ್-ಪೇಪರ್ ಹಿಡಿದು ಹೋದೆ. ಮೊದಲೇ ನಾನು "ಮೆಂತೆ ಕಡುಬು" ನೆ ಸರಿಯಾದ ತಿನಿಸು ಅಂತ ತೀರ್ಮಾನಿಸಿದ್ದೆ ....ಅಮ್ಮನಿಗೆ ಅದನ್ನು ಮಾಡುವ ವಿದಾನ ವಿವರಿಸಲು ಕೇಳಿ ಬರೆದುಕೊಂಡೆ. ಅಮ್ಮನಿಗೆ ಇದನ್ನು ನಾನು ಯಾಕೆ ಬರೆದುಕೊಂಡೆ ಅನ್ನುವ ಸುಳಿವು ಸಿಕ್ಕಿದ್ದರು ಅದರ ಮೇಲೆ ಹೆಚ್ಚು ಗಮನ ಕೊಟ್ಟಿರಲಿಲ್ಲ.

ನನ್ನ ದುಂಡಾದ ಅಕ್ಷರದಲ್ಲಿ ಮೆಂತೆ ಕಡುಬು ಮಾಡುವ ವಿಧಾನವನ್ನು ವಿವರಿಸಲು ೨ ದಿನ ಬೇಕಾಯಿತು ....ಕನ್ನಡ ಬರೆಯೋದು ಸ್ವಲ್ಪ ಕಷ್ಟ ನನಗೆ....ಆದ್ರೆ ಯಾರಿಗೂ ಸುಳಿವು ಕೊಡದೆ ಬರಿಬೇಕಿತ್ತು ;-). ಕೊನೆಗೆ ಬರೆದು ಮುಗಿಸುವ ಹೊತ್ತಿಗೆ ಆಸಕ್ತಿ ಕಳೆದುಕೊಂಡು ಪತ್ರ ಹಾಕದೆ ಹಾಗೆ ಇಟ್ಕೊಂಡಿದ್ದೆ. ಮತ್ತೆ ಕೆಲ ದಿನಗಳ ನಂತರ ಈ ಟಿವಿ ಯಲ್ಲಿ ಶ್ರುತಿ ಅವರ ವಿವರಣೆ ನೋಡಿ ...ಕೊನೆ ದಿನ ಅಂತ ತಿಳಿದು ಪತ್ರವನ್ನು ಅಮ್ಮನ ಹೆಸರಲ್ಲಿ ಪೋಸ್ಟ್ ಮಾಡಿದೆ. ಆಮೇಲೆ ಅದನ್ನು ಮರತೇ ಹೋಗಿದ್ದೆ.

ಸುಮಾರು ೧ ತಿಂಗಳು ಕಳಿದಿರಬೇಕು ಹಾಗೆ ಯಾವುದೊ ದಾರವಾಹಿ ನೋಡ್ತಾ ಇದ್ದೆ ...ಅಮ್ಮ ಹೊರಗಡೆ ಹೋಗಿದ್ರು ....ಅಮ್ಮನ ಹೆಸರು ಸೀರಿಯಲ್ ಮಧ್ಯ ಕೆಳಗಡೆ ಸ್ಕ್ರೋಲ್ ಆಗೋದು ನೋಡಿದೆ. ಮೊದಲಿಗೆ ಅನ್ನಿಸಿದ್ದು ...ಯಾರದೋ ಹೆಸರು ಅಮ್ಮನ ಹೆಸರು ಒಂದೇ ಇದೆ ಅಂತ. ಇದು ೨ ದಿನ ಹಾಗೆ ಬರ್ತಾ ಇತ್ತು ನಾನು ನೋಡ್ತಾ ಇದ್ದೆ ಅಮ್ಮನಿಗೂ ಹೇಳಿದ್ದೆ. ಆದರೆ ಆ ಹೆಸರು ಅಮ್ಮನದೇ ಅಂತ ಹೊಳಿಲೇ ಇಲ್ಲ. ಮೂರನೇ ದಿನ ಅದನ್ನು ಮೊದಲಿನಿಂದ ಓದಿದೆ ....."vim" ಹಾಗು "Prestige" ಅಂತ ನೋಡಿ ಏನೋ ಹೊಳಿತು. ಆಗ ಅಮ್ಮ .....ಅಂತ ಜೋರಾಗಿ ಕೂಗಿದೆ ....ಅಮ್ಮ ಒಳಗಿಂದ ಓಡಿ ಬಂದ್ರು ಏನಾಯಿತು ಅಂತ. ನಮಗೆ ಬಹುಮಾನ ಬಂದಿತ್ತು ....ಅಮ್ಮನಿಗೆ ಹೇಳಿದ್ರು ನಾನು ತಮಾಷೆ ಮಾಡ್ತಾ ಇದೀನಿ ಅಂತ ಅನ್ಕೊಂಡ್ರು. ಅವರಿಗೆ ನಾನು ಪತ್ರ ಬರೆದ ವಿಷಯ ತಿಳಿಸಿದ ಮೇಲೆ ನಂಬಿ ತುಂಬಾ ಕುಷಿ ಪಟ್ರು ....ಎಲ್ಲರಿಗೆ ಫೋನ್ ಮಾಡಿ ಹೇಳಿದ್ರು :-).

ಅಪ್ಪ ಅಣ್ಣನಿಗೆ ಕೂಡ ಕುಷಿ ಆಯಿತು. ಆಮೇಲೆ ತಿಳಿದ ವಿಷಯ ೩ ಲಕ್ಷದ ಬಹುಮಾನದಲ್ಲಿ ಮುಕ್ಕಾಲು ಭಾಗ ಬಹುಮಾನ ಮೊದಲ ವಿಜೇತರಿಗೆ .....ಉಳಿದ ಭಾಗ ಮೂರು ಜನರ ಮಧ್ಯ ತಲಾ ೧೫ ಸಾವಿರ. ನಮಗೆ ಸಿಕ್ಕಿದ್ದು ೧೫ ಸಾವಿರದ ಬಹುಮಾನ. ಆದರು ಕುಷಿ ಆಯಿತು ....ಆದರೆ ತುಂಬ ಕುಷಿ ಆಗಿದ್ದು ಒಂದು ವಿಷಯ ತಿಳಿದ ನಂತರ.....ಅದೇನೆಂದರೆ ನಾಲ್ಕು ಜನ ವಿಜೇತರನ್ನು ಈ ಟಿವಿ ಕನ್ನಡದ "ಸವಿರುಚಿ" ಅನ್ನುವ ಅಡುಗೆ ಕಾರ್ಯಕ್ರಮದಲ್ಲಿ ಕರೆಸಿ ತಾವೇ ಮಾಡಿ ತೋರಿಸಬೇಕು ಅಂತ ಹೇಳಿದಾಗ :-)).

ಅಮ್ಮ ಮೊದಲಿಗೆ ಸ್ವಲ್ಪ ಭಯ ಪಟ್ರು ...ನಾನು ಅಪ್ಪ ಸೇರಿ ಅವರಿಗೆ ಇಂತ ಅವಕಾಶ ಮತ್ತೆ ಸಿಗೋಲ್ಲ ಅಂತ ಹೇಳಿ ಹುರಿದುಂಬಿಸಿದಾಗ ಕೊನೆಗೆ ಒಪ್ಪಿಕೊಂಡರು. ಒಂದು ದಿನ ಸವಿರುಚಿ ನಿರ್ದೇಶಕರು ನಮ್ಮ ಮನೆಗೆ ಫೋನ್ ಮಾಡಿ ಶೂಟಿಂಗ್ ಡೇಟ್ ಹೇಳಿದ್ರು. ನಾವು ಬೆಂಗಳೂರಿಗೆ ಹೋಗಿ ಬರುವ ಮತ್ತು ಉಳಿದುಕೊಳ್ಳುವ ವ್ಯವಸ್ಥೆ ಈ ಟಿವಿ ನೋಡಿಕೊಳ್ಳುವುದಾಗಿ ಹೇಳಿದರು. ಕೊನೆಗೆ ಅಪ್ಪ ನೀನೆ ಇದೆಲ್ಲ ಶುರು ಮಾಡಿದ್ದು ನೀನೆ ನೋಡಿಕೋ ಅಂತ ಹೇಳಿ ಬೆಂಗಳೂರಿಗೆ ಅಮ್ಮನ ಜೊತೆ ಹೋಗೋ ಜವಬ್ದಾರಿ ನನ್ನ ಮೇಲೆ ಹಾಕಿದ್ರು. ನನಗೆ ಒಳಗೊಳಗೇ ಕುಷಿ ಆದರು ಸ್ವಲ್ಪ ಭಯ ಇತ್ತು.

ಅಮ್ಮನ ಜೊತೆ ನಾನು ಬೆಂಗಳೂರಿಗೆ ತಲುಪಿದೆ ....ಬನಶಂಕರಿ ಯಲ್ಲಿ ಶೂಟಿಂಗ್ ಇದೆ ಅಂತ ಹೇಳಿದ್ರಿಂದ ನನ್ನ ಮಾಮನ ಮನೆಗೆ ಹೋದ್ವಿ , ಹತ್ರ ಆಗುತ್ತೇ ಅಂತ. ಅಲ್ಲಿಗೆ ಈ ಟಿವಿ ಅವರು ಬಂದು ಕರೆದುಕೊಂಡು ಹೋದ್ರು. ಶೂಟಿಂಗ್ ಯಾರದೋ ಮನೆಯಲ್ಲಿ ಅಂತ ತಿಳೀತು ...ಅಲ್ಲಿಗೆ ಆಗಲೇ ಉಳಿದ ವಿಜೇತರು ಬಂದಿದ್ದರು. ೨ ಗಂಟೆ ಕಾದ ಬಳಿಕ ಕಾರ್ಯಕ್ರಮ ನಡಿಸಿಕೊಡುವ ನಿರೂಪಕಿ ಆಗಮಿಸಿದರು. ಅವರ ಹೆಸರು ಸುಷ್ಮಾ ....ನಂತರ ತಿಳಿದ ವಿಷಯ ...ಅದು ಅವಳ ಮೊದಲನೆಯ ನಿರೂಪಣೆ . ಏನೆ ಹೇಳಿದ್ರು ಸುಂದರವಾಗಿದ್ದರು. ನನ್ನ ಅಮ್ಮನದು ಎರಡನೇ ಸರದಿ ...ನೋಡಿ ಕಲಿಯುವುದಕ್ಕೆ ಒಳ್ಳೆ ಅವಕಾಶ ಅಂತ ಅಮ್ಮನಿಗೆ ಹೇಳಿದೆ. ಆದರು ಅಮ್ಮ ಸ್ವಲ್ಪ ನರ್ವಸ್ ಆಗಿದ್ದು ಕಾಣಿಸಿತು ....ನಾನು ಏನು ಹೇಳಲಿಕ್ಕೆ ಹೋಗಲಿಲ್ಲ.

೩ ಗಂಟೆ ಕಾದ ಬಳಿಕ ಅಮ್ಮನ ಸರದಿ ಬಂತು ...ಅಮ್ಮ ರೆಡಿ ಆಗುವ ಹೊತ್ತಿಗೆ ಊಟದ ಸಮಯ ಅಂತ ಹೇಳಿ ಶೂಟಿಂಗ್ ಯೋನಿಟ್ ಜೊತೆ ನಮ್ಮ ಊಟ ಸಿದ್ದವಾಯಿತು ....ಊಟ ಮಾಡಿದ ಬಳಿಕ ಅಮ್ಮ ಕ್ಯಾಮೆರಾ ಮುಂದೆ ಹೋಗಲು ತಯ್ಯಾರಾದರು. ಮುಂದೆ ನೆಡೆದ ವಿಷಯ ಇವತ್ತಿಗೂ ನಂಬಲಿಕ್ಕೆ ಆಗೋಲ್ಲ ನನಗೆ. ಅಮ್ಮನಿಗೆ ಅದು ಎಲ್ಲಿಂದ ಅಷ್ಟು ಆತ್ಮವಿಶ್ವಾಸ ಬಂತೋ ಗೊತ್ತಿಲ್ಲ ಕ್ಯಾಮೆರಾ ಮುಂದೆ ಹೋಗಿದ್ದೆ ಸಾಕು ಅವರ ಕನ್ನಡ ಅವರ ಸ್ಪಷ್ಟ ಮಾತು ವಿಚಾರ ಕೇಳಿ ನನಗೆ ಆಶ್ಚರ್ಯ. ನಿರ್ದೇಶಕರು ಒಂದು ಕಟ್ ಇಲ್ಲದ ಹಾಗೆ ೧೫ ನಿಮಿಷ ಕ್ಯಾಮೆರಾ ಓಡಿಸ್ತಾ ಇದ್ರೂ ...ಅವರಿಗೆ ಕುಷಿ. ಆಮೇಲೆ ಒಂದು ಕಡೆ ಕಟ್ ಆಯಿತು ಆದರೆ ಅದು ನಿರೂಪಕಿಯ ತಪ್ಪಿನಿಂದ :-) ಸುಷ್ಮಾ ಸ್ವಲ್ಪ ನರ್ವಸ್ ಆಗಿದ್ರು ....ಅಲ್ಲಿ ಅಮ್ಮ ನಿರೂಪಕಿಗೆ ಒಂದು ಮಾತು ಹೇಳಿದ್ದು ಕೇಳಿ ಎಲ್ಲರೂ ಚಪ್ಪಾಳೆ ತಟ್ಟಿದರು....ಅಮ್ಮ ಹೇಳಿದ್ರು " ನಿನ್ನ ಎದುರು ಕ್ಯಾಮೆರಾ ಇದೆ ಅಂತ ಮರೆತು ಬಿಡು".

ಮೆಂತೆ ಕಡುಬು ಮಾಡಿ ಮುಗಿದ ಮೇಲೆ ಎಲ್ಲರೂ ತಿಂದು ಇಷ್ಟ ಪಟ್ಟಿದ್ದು ಅಮ್ಮನ ತಿನಿಸೇ ..ಸ್ವಲ್ಪ ಖಾರ, ಮಸಾಲ ಇರೋದ್ರಿಂದ ಎಲ್ಲರಿಗೂ ಅದೇ ಇಷ್ಟ ಆಯಿತು ಅನ್ನಿಸುತ್ತೆ. ಉಳಿದ ವಿಜೇತರು ಮೆಂತೆ ಕಡುಬನ್ನೇ ಇಷ್ಟ ಪಟ್ಟರು. ಶೂಟಿಂಗ್ ಎಲ್ಲ ಪ್ಯಾಕ್ ಅಪ್ ಆಗುವ ಹೊತ್ತಿಗೆ ಸಂಜೆ ೫ ಗಂಟೆ. ನಮ್ಮನ್ನು ಮತ್ತೆ ಮನೆಗೆ ಬಿಟ್ಟು ಹೋದ್ರು.

ಸ್ವಲ್ಪ ದಿನಗಳ ನಂತರ ೧೫ ಸಾವಿರ ಮೊತ್ತದ "Prestige" ಸಾಮಾನುಗಳು ಮನೆಗೆ ತಲುಪಿದವು ....ಸ್ಟೋವ್, ಕುಕ್ಕರ್, ಮಿಕ್ಸರ್, ಚಾಕು ಸೆಟ್ ಎಲ್ಲಾ ಇತ್ತು. ಮತ್ತೆ ಸವಿರುಚಿ ನಿರ್ದೇಶಕರು ಫೋನ್ ಮಾಡಿ ಅಮ್ಮನ ಕಾರ್ಯಕ್ರಮದ ವೇಳಾಪಟ್ಟಿ ತಿಳಿಸಿದರು....ಜನವರಿ ೨೫ ೨೦೦೨ ಮಧ್ಯಾನ ೧೨ ರಿಂದ ೧೨:೩೦ ರ ಒಳಗೆ.

ಆದರೆ ನಂಬಲಿಕ್ಕಾಗದ ಹಾಗು ಅತ್ಯಂತ ವಿಷಾದದ ಸಂಗತಿ ಎಂದರೆ ಇಂದಿಗೂ ನಾವು ಆ ಕಾರ್ಯಕ್ರಮ ನೋಡದೆ ಇರುವುದು. ಅಮ್ಮನಿಗೆ ಇಂದಿಗೂ ಅದರ ಬಗ್ಗೆ ಬೇಜಾರು ಹಾಗು ಸಿಟ್ಟು :( .....ಕಾರ್ಯಕ್ರಮ ಪ್ರಸಾರದ ಸಮಯ ಇನ್ನೇನು ೧೦ ನಿಮಿಷ ಇದೆ ಅನ್ನುವಾಗ ಹೋದ ಕೇಬಲ್ .....ಬಂದಿದ್ದು ಕಾರ್ಯಕ್ರಮ ೧೦ ನಿಮಿಷ ಆದ ಮೇಲೆನೆ. ಅಮ್ಮನಿಗೆ ಅಂದಿನಿಂದ ಕೇಬಲ್ ನವರನ್ನ ಕಂಡರೆ ಸಿಟ್ಟು. ನಾವು ಒಂದು ವರ್ಷ ಕೇಬಲ್ ಬಿಲ್ ಕಟ್ಟಲಿಲ್ಲ ....ಅವರೂ ಒಪ್ಪಿಕೊಂಡರು. ಕಾರ್ಯಕ್ರಮ ಪ್ರಸಾರ ಆದ ಮೇಲೆ ಅಕ್ಕ ಪಕ್ಕದವರಿಂದ ಕರೆಗಳು ....ನಮ್ಮ ನೆಂಟರ ಕರೆಗಳು ಬಂದಿದ್ದೇ ಬಂದಿದ್ದು ....ಇದರಲ್ಲೇ ಕುಷಿ ಪಟ್ಟಿದ್ದು :-). ನಿರ್ದೇಶಕರನ್ನು ಕ್ಯಾಸೆಟ್ ಕಳಿಸಲು ಹೇಳಿದ್ವಿ ....ಎಂದಿಗೂ ನಮ್ಮ ಕೈ ಸೇರಲಿಲ್ಲ ಅದು.

ಆದರೂ ಎಲ್ಲ ಹೊಸ ಅನುಭವ ಹೊಸ ಪರಿಚಯ ...ಚೆನ್ನಾಗಿ ಇತ್ತು. ಸುಷ್ಮಾ ಇಂದು ಒಳ್ಳೆ ನಟಿ ಆಗಿದ್ದಾರೆ...ಮುಕ್ತ ದಾರವಾಹಿ ಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಿಮಗೂ ಮೆಂತೆ ಕಡುಬು ತಿನ್ನಬೇಕೆ ?

Wednesday, December 3, 2008

Who'l control the news ?

News ….News …..News …..News all around ….everything and anything is news today. Just a decade ago news of a huge political change, an earthquake or India winning a cricket match was reaching us only during news hour in a TV channel or may be on the next day when we read the news papers. We used to get genuine news of what actually happened. But today you have dedicated news channels 24/7 competing to serve the hot news on “who’s first to broadcast” basis. Same way we have afternoon and evening editions of news papers. But in the hurry to broadcast the stories, these news channels will not hesitate to add spice to it. Later when they realize that the spice they added had hurt someone’s sentiment or disturbed the public’s belief in the system….they just apologize…that’s it.

Instance of such hurry is like a news channel flashed the fall of an important wicket in a recent one day match….but actually the result was still pending with the third umpire. And in recent Mumbai attacks some news channels were increasing the dead count like a run scorecard when Dhoni is batting. They just listen to rumors I guess and flash it as news. We know how a rumor spreads and affect many people’s normal life and sentiments. In my view, these news channels are nothing but a glorified rumor presenter in sophisticated way. They create more panic than creating awareness.

The influence of media on our day to day life has increased a lot in past few years. I feel, whatever thoughts and opinion we have about any topic of public interest like Cricket, Terrorism, a scandal or a well known individuals personal life is completely based on the media. We basically come to know about these from the media and we believe in it right away without giving it a thought. Ultimately if we see the information that we have learnt from a news channel is actually one individual’s point of view or a group of like minded people broadcasting that news. This can be proved if you track the same news being shown on different channels…they are completely inconsistent and each one is give his side of story. There are some prominent names associated with NDTV, CNN IBN ….who create new sensational news on their own than broadcasting what happened. They actually provoke people on sensitive issues in the name of debate and make an innocent public aware of the negative thoughts involved.

Technological advances has now made possible to telecast news LIVE to the audience. Yes this is great help but I see a loophole in this. For example, in the recent terrorist attacks the terrorists inside the building were making their moves only after they learned the actions taken by the cops outside. How was it possible? Yes….our news channels were showing the LIVE actions of our cops…..terrorists were watching this inside. Is it not foolish? Also I hear some news channels telecast the actions and strategy that the police will use to tackle a criminal or an outlawed group. Does it seem to be logical? The problem is far deeper..…some politician learns about some important sensitive information and to grab the public attention or grab some fast buck he discloses it to some reporter. And there it goes…..the news channel without giving a thought of effect of the news leak….just to be first telecasts it.

If we just count the number of news channels you will be surprised ….we have international, national, regional and don’t forget the local news channels. They all are for same purpose, but the importance of news that they deliver reduces from international to local….or I can say the audience reach reduces. They are main tools for publicity of a certain product or an individual. The worst part is that some news channels and news papers being controlled by a particular political party. You can guess the effect of this. Actually some political parties own these media and they can filter the news which ever is in their favor. During elections these channels are their canvas for publicity.

Funny things happen when there is no hot news to broadcast on these channels. They start making news out of anything normal or silly…..like the commissioner’s dog lost, a lady’s chain snatched or a psychotic behavior of guy eating razor blades will be projected as an extraordinary talent. News channels are meant to create awareness about the issues. Apart from telecasting what happened they should also take the responsibility of telling what precautions or measures to be taken to avoid or overcome some issues. Very less channels do it.

Today we have educational institutes that give degrees in mass media and journalism. Many are interested who prefer outdoor job. Graduates out with these degrees are looking for a job in these new news channels and they can do anything to get hot news up to the reporter. There actually is a stiff competition going on between few top news channels and they can do anything to be on the top.

How much we can trust the news on these channels?
Should there be a regulatory body to control these channels?
Should there be a limit on number of news channels?
How much news is useful to us?
What kind of news is useful to us?

Give it a thought!!
I think we too are to blame, as we seek for a new thrill in everything out of our normal routine life. Isn’t it?